Index   ವಚನ - 49    Search  
 
ಹುಲಿಯ ಬಾಯೊಳು ಸಿಲ್ಕಿದೆರಳೆಯಮರಿಯಂತೆ, ಸರ್ಪನ ಬಾಯೊಳು ಸಿಲ್ಕಿ[ದ] ಕಪ್ಪೆಯಮರಿಯಂತೆ, ಮಾರ್ಜಾಲನ ಬಾಯೊಳು ಸಿಲ್ಕಿದ ಮೂಷಕನಂತೆ, ಮಾಯೆ ತನ್ನ ಬಾಯೊಳಿಕ್ಕಿ ಎನ್ನ ತಿಂದು ತೇಗುತಿದೆ! ಇದಕಿನ್ನೆಂತೊ ಹರಹರ! ನಿನಗನ್ಯನಾದ ಕಾರಣ ಎನಗೀ ದುರಿತ, ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.