ಹುಲಿಯ ಬಾಯೊಳು ಸಿಲ್ಕಿದೆರಳೆಯಮರಿಯಂತೆ,
ಸರ್ಪನ ಬಾಯೊಳು ಸಿಲ್ಕಿ[ದ] ಕಪ್ಪೆಯಮರಿಯಂತೆ,
ಮಾರ್ಜಾಲನ ಬಾಯೊಳು ಸಿಲ್ಕಿದ ಮೂಷಕನಂತೆ,
ಮಾಯೆ ತನ್ನ ಬಾಯೊಳಿಕ್ಕಿ ಎನ್ನ ತಿಂದು ತೇಗುತಿದೆ!
ಇದಕಿನ್ನೆಂತೊ ಹರಹರ! ನಿನಗನ್ಯನಾದ ಕಾರಣ ಎನಗೀ ದುರಿತ,
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
Art
Manuscript
Music
Courtesy:
Transliteration
Huliya bāyoḷu silkideraḷeyamariyante,
sarpana bāyoḷu silki[da] kappeyamariyante,
mārjālana bāyoḷu silkida mūṣakanante,
māye tanna bāyoḷikki enna tindu tēgutide!
Idakinnento harahara! Ninagan'yanāda kāraṇa enagī durita,
paramaguru paḍuviḍi sid'dhamallināthaprabhuve.