Index   ವಚನ - 50    Search  
 
ಬಲೆಯೊಳಗಣ ಅನಿ[ಮಿಷ]ನಂತೆ, ಕೂಪವ ಬಿದ್ದ ಸರ್ಪನಂತೆ, ಮಧುರದೊಳು ಬಿದ್ದ ಮಕ್ಷಕನಂತೆ, ಮಾಯಪಾಶವೆಂಬ ಬಲೆಯೊಳೆನ್ನನಿಕ್ಕಿ ಕಾಡುತ್ತಿದ್ದೆಯಲ್ಲ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.