ಪಂಕದಲ್ಲಿ ಬಿದ್ದ ಪಶುವಿನಂತೆ,
ಕಿರಾತನ ಕೈಯ ಮೃಗದಂತೆ,
ಗರುಡನ ಮುಂದಿನ ಸರ್ಪನಂತೆ,
ಸಿಂಹದ ಮುಂದಣ ಕರಿಯಂತೆ,
ದೀಪದ ಮುಂದಣ ಪತಂಗನಂತೆ,
ಪಾಪಿಯ ಕೂಸಿನಂತೆ.
ಇಂತಿವೆಲ್ಲಕ್ಕೆಯೂ ಸ್ಥಿರವಿಲ್ಲದಂತೆ,
ಮಾಯವೆಂಬ ರಾಕ್ಷಿಯ ಬಲೆಯಲ್ಲಿ ಸಿಲ್ಕಿ ಬಳಲುತಿರ್ದೆ.
ನಿನಗನ್ಯನಾದ ಕಾರಣ ಎನಗೀ ದುರಿತ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
Art
Manuscript
Music
Courtesy:
Transliteration
Paṅkadalli bidda paśuvinante,
kirātana kaiya mr̥gadante,
garuḍana mundina sarpanante,
sinhada mundaṇa kariyante,
dīpada mundaṇa pataṅganante,
pāpiya kūsinante.
Intivellakkeyū sthiravilladante,
māyavemba rākṣiya baleyalli silki baḷalutirde.
Ninagan'yanāda kāraṇa enagī durita
paramaguru paḍuviḍi sid'dhamallināthaprabhuve.