Index   ವಚನ - 60    Search  
 
ಕೋಣನ ಕೊರಳಲ್ಲಿ ಕಪಿ, ಬೆನ್ನಿನಲ್ಲಿ ರಕ್ಷಿ, ಬಾಲದ ಜವೆಗೊಂದೊಂದು ಮುಸುವ, ಕೊಂಬಿನ ಮೇಲೆ ಕುಣಿವ ಗಿಡುಗ; ಇಂತಿವೆಲ್ಲವ ಸಂತೈಸಿಕೊಂಡು ರಕ್ಷಿ ನಡೆದಳು. ತಮಪುರವೆಂಬ ಪಟ್ಟಣಕ್ಕೊಸ್ತಿಯ ಹೋಗಿ, ಆ ಪಟ್ಟಣದೊಳು ಸ್ಥಿರವಾಗಿ ನಿಂದು, ಬದುಕು ಮನೆ ಅರ್ಥವಂ ಗಳಿಸಿ, ತಮಪುರದರಸಿಂಗೆ ಸರಿಗೊರನಿಕ್ಕಿ ತಮದ ಮರೆಯಲ್ಲಿಪ್ಪ ವನಿತೆಯ ಕಂಡರೊ[0ದ]ಗ್ನಿ, ನಡೆದರೆರಡಗ್ನಿ, ನುಡಿದರೆ ಮೂರಗ್ನಿ, ಕೇಳಿದರೆ ನಾಲ್ಕಗ್ನಿ, ವಾಸಿಸಿದರೈದಗ್ನಿ. ಆ ಗಿರಿಯೊಳು ನಿಂದು, ಗಿಡುಗನನಡಸಿ, ಮುಸುವನ ಹರಿಯಬಿಟ್ಟು, ಕಪಿಯ ಕೈವಿಡಿದು ಜಪವ ಮಾಡಿ, ಕೋಣನ ನೆರೆ ಕೂಗುವವ ನುಡಿಯ ಪಾಶದೊಳು ಸಿಲ್ಕಿ, ತ್ರಿಲೋಕವೆಲ್ಲ ವ್ರತಭ್ರಷ್ಟರಾದ ಚೋದ್ಯವ ಕಂಡು ನಾ ಬೆರಗಾಗುತಿರ್ದೆನು ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.