ಧರೆಯಾಗಿ ನಿಂದು, ಹರಿಯಾಗಿ ಹರಿದು,
ಉರಿಯಾಗಿ ಉಲಿವ ಅಂಗನೆ,
ಬ್ರಹ್ಮ ವಿಷ್ಣು ರುದ್ರರ ನುಂಗಿ ಜಾಲವ ಬೀಸುತಿಪ್ಪಳು ನೋಡಾ!
ಆಕೆಯ ಮಹೇಂದ್ರಜಾಲದ ತೆರೆಯೊಳು ಅನಿಮಿಷ
ಮೊದಲು ತಲೆಯಿಲ್ಲದ ಏಡಿಯ ನುಂಗಿ,
ಆ ಏಡಿಯ ಬೆನ್ನಿನಲ್ಲಿ ಆನೆ ಎಂಟು, ಶ್ವಾನ ಐದು,
ಆರು ಮೊಸಳೆಯ ನುಂಗಿ, ಏಳು ಬಗೆಯ ಮಡುವಿಗೆ ಬಿದ್ದು,
ತಮ್ಮ ತಾವೆ ಒದ್ದಾಡುತಿವೆ ಇದೇನು ಚೋದ್ಯ ಹೇಳಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ!