Index   ವಚನ - 65    Search  
 
ರಕ್ಷಿಗೆ ಒತ್ತೆಯ ಕೊಟ್ಟ ಶಿಶುವಿನಂತೆ, ಕಟುಕಗೆ ಮಾರಿದ ಕುರಿಯಂತೆ, ಕಮ್ಮಾರಗೆ ಮಾರಿದ ಕಬ್ಬಿಣದಂತೆ, ಅಕ್ಕಸಾಲಿಗೆ ಮಾರಿದ ಸೀಸದಂತೆ, ಮಾಯಾಭ್ರಮೆಗೆನ್ನ ಮಾರಿ, ಕರಗಿಸಿ ಕೊರಗಿಸಿ ಕೋಯಿಸಿ ತಿನಿಸಿ ಸುಟ್ಟು ಸೂರೆಮಾಡಿ ಎನ್ನ ಕಾಡುತ್ತಿದ್ದೆಯಲ್ಲ! ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.