Index   ವಚನ - 67    Search  
 
ಗಳಿಗೆಯ ಮೇಲೆ ಗಾಳಿ ಹರಿಯದ ಮುನ್ನ ಕೊಳಗ ರಾಶಿಯ ನುಂಗುವುದ ಕಂಡೆ. ಮುಂಡವೆದ್ದು ಭೂಮಂಡಲವ ನುಂಗಿ ಆಲಿಯ ಮರೆಗೊಂಬುದ ಕಂಡೆನು. ಹಗಲೆಗತ್ತಲೆಯಾಗಿ ಆಗ ಗಿಡಿಯ ಮಂಜಿನ ಹೊಗೆಯ ದಾಳಿಯ ಕಂಡೆನು. ಅಂಬುಧಿಯೊಳು ಮುಳುಗಿ ಲೋಕ ತೇಲಾಡುವುದ ಕಂಡೆನು. ಇದೇನು ಚೋದ್ಯ ಹೇಳಾ! ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.