Index   ವಚನ - 79    Search  
 
ಹತ್ತುವಾಯು ಹರಿದಾಡಿ ಆನೊಳ ಸುತ್ತಿ ಸುತ್ತಿ ಕೃತ್ಯದಿಂದ ನರಳಿಸಿ ಒರಲಿಸಿ ಚೇತರಿಸಿ ಆವರಿಸಿ ಕಾಡುತಿದೆ. ಅದು ಎಂತೆಂದೊಡೆ: ಅರೆಗಾಯವಡೆದ ಉರಗಗೆ ಇರುವೆ ಮುಕುರುವಂತೆ, ದಶವಾಯುಗಳ ಮುಖದಲ್ಲಿ ಹರಿವ ಕರಣೇಂದ್ರಿಯಂಗಳು ಮನವೆಂಬ ಅರೆಗಾಯದ ಸರ್ಪಂಗೆ ಮುಕುರಿ ನರಳಿ[ಸಿ] ಕಾಡುತಿವೆ; ಕಾಡಿದರೇನು? ಹಲವು ಬಗೆಯಲ್ಲಿ ಹರಿವ ವಾಯುಮುಖದಲ್ಲಿ ನೀನೆ; ನೀನಲ್ಲದನ್ಯವಿಲ್ಲ . ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.