ಕಣ್ಗಾಣದೆ ಲೋಕ ಮಾಯಾತಮಂಧವೆಂಬ
ಬಣ್ಣಛಾಯಕ್ಕೆ ಸಿಲ್ಕಿ ಭ್ರಮಿತಗೊಂಡಿತು.
ತನುಮದ ಹುತ್ತದೊಳು ಮನವಿಕಾರದ ಸರ್ಪ
ಜನರನೆಲ್ಲರ ಕಚ್ಚಿ ವಿಷವೇರಿಸಿ
ಅನುದಿನ ಉಳಿಯಗೊಡದಾ ಮಾಯಾತಮಂಧವೆಂಬ
ಅಣಲಿಂಗೆ ಗುರಿಯಾಗಿ ಬರಿದೆ ಕಲಿಗೆಡುತಲಿ. | 1 |
ಷಡೂರ್ಮೆ ಷಟ್ಕರ್ಮ ಷಡ್ಭಾವವೈಕರಣ
ಷಡ್ಭ್ರಮೆಗಳೆಂದೆಂಬುದ
ಷಡು ಅಂಗ ಕತ್ತಲೆಗೆ
ನಡೆದು ಮೈಮರೆದು ಬರಿದೆ. | 2 |
ಅಸಿಯ ಜವ್ವನೆಯರ ವಿಷಯರಸವೆಂದೆಂಬ
ಪ್ರಸರದೊಳು ಲೋಕವನು ಗುರಿಮಾಡಿಯೆ;
ಅಸನ ವ್ಯಸನ ನಿದ್ರೆ ಆಲಸ್ಯ ಮಾಯಾತನು
ಬೆಸುಗೆಯೊಳು ಸಿಲ್ಕಿ ಬರಿದೆ. | 3 |
ಹಿರಿದು ಮಾಯಾತಮವೆಂಬ ಕತ್ತಲೆಯೊಳಗೆ ನಡೆದು
ಬರುತಲಿ ಅಜ್ಞಾನವೆಂದೆಂಬುವ
ಕೊರಡನೆಡವಿಯೆ ತಾಪತ್ರಯದಗ್ನಿಗಿರಿಯೊಳಗೆ
ಮರೆಗೊಂಡು ಮುಂದುಗಾಣದೆ ಮೂಲೋಕ | 4 |
ಸುರೆಗುಡಿದ ಮರ್ಕಟಗೆ ವಿರಚಿ ಭೂತಂ ಸೋಂಕಿ
ಹಿರಿದು ಚೇಷ್ಟೆಯ ತೆರದಿ ಮಾಯಾಮದದ
ಗುರುವಹಂಕಾರ ಮನ ಚೇಷ್ಟೆಯಂಗಳ ತೊರದು
ಗುರುಸಿದ್ಧ ಮಲ್ಲಿನಾಥನೊಳು ಬೆರೆಯಲರಿಯದೆ. | 5 |
Art
Manuscript
Music
Courtesy:
Transliteration
Kaṇgāṇade lōka māyātamandhavemba
baṇṇachāyakke silki bhramitagoṇḍitu.
Tanumada huttadoḷu manavikārada sarpa
janaranellara kacci viṣavērisi
anudina uḷiyagoḍadā māyātamandhavemba
aṇaliṅge guriyāgi baride kaligeḍutali. | 1 |
Ṣaḍūrme ṣaṭkarma ṣaḍbhāvavaikaraṇa
ṣaḍbhramegaḷendembuda
ṣaḍu aṅga kattalege
naḍedu maimaredu baride. | 2 |Asiya javvaneyara viṣayarasavendemba
prasaradoḷu lōkavanu gurimāḍiye;
asana vyasana nidre ālasya māyātanu
besugeyoḷu silki baride. | 3 |
Hiridu māyātamavemba kattaleyoḷage naḍedu
barutali ajñānavendembuva
koraḍaneḍaviye tāpatrayadagnigiriyoḷage
maregoṇḍu mundugāṇade mūlōka | 4 |
sureguḍida markaṭage viraci bhūtaṁ sōṅki
hiridu cēṣṭeya teradi māyāmadada
guruvahaṅkāra mana cēṣṭeyaṅgaḷa toradu
gurusid'dha mallināthanoḷu bereyalariyade. | 5 |
ಸ್ಥಲ -
ಮಾಯಾತಮಂಧ ನಿರಸನಸ್ಥಲ