ಅಂಗದೊಳಗಣ ಅಷ್ಟಮದಮೋಹಿನಿಗಳನಾರನೂ ಕಾಣೆ.
ಭಂಗಿಯ ಸೊಪ್ಪು ತಿಂದ
ಬಳ್ಳು ಉಳ್ಳಿಟ್ಟು ಒದರುವಂದದಿ
ದೇಹ ಆತ್ಮದ ತಲೆಗೇರಿ,
ಬರಿದೆ ವೇದಶಾಸ್ತ್ರಪುರಾಣವೆಂದೋದಿ
ಬಲ್ಲವರೆನಿಸಿಕೊಂಬರು ಲಜ್ಜೆಭಂಡರು.
ನುಡಿಯಂತೆ ನಡೆಯಲರಿಯದ ಜಡದೇಹಿಗಳ ಮೆಚ್ಚುವನೆ
ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
Art
Manuscript
Music
Courtesy:
Transliteration
Aṅgadoḷagaṇa aṣṭamadamōhinigaḷanāranū kāṇe.
Bhaṅgiya soppu tinda
baḷḷu uḷḷiṭṭu odaruvandadi
dēha ātmada talegēri,
baride vēdaśāstrapurāṇavendōdi
ballavarenisikombaru lajjebhaṇḍaru.
Nuḍiyante naḍeyalariyada jaḍadēhigaḷa meccuvane
nam'ma paramaguru paḍuviḍi sid'dhamallināthaprabhuve.
ಸ್ಥಲ -
ಅಂತರಂಗದ ಅಷ್ಟಮದನಿರಸನಸ್ಥಲ