ಕರಿಯ ಕಾಲೊಳಗೆ ಸಿಕ್ಕಿದ ಮರಿಯ ನಾಯಿಯಂತೆ,
ಅಷ್ಟಮದವೆಂಬ ಕರಿಯ ಕಾಲೊಳಗೆನ್ನ ಸಿಗಿಸಿ,
ಮೆಟ್ಟಿ ಮೆಟ್ಟಿ ತುಳಿಸುತ್ತಿದ್ದೆಯಲ್ಲ!
ಅರಸಿನ ಉಪ್ಪನುಂಡು ಆನೆ ಸೇನೆ ದಳ
ಅರಸ[ನ] ಕೈಸೆರೆ ಹಿಡಿವಂತೆ,
ಎನ್ನಾತ್ಮದಲ್ಲಿ ಹುಟ್ಟಿದ ಮದ,
ಎನ್ನನೆ ತಿಂದು ತೇಗುತ್ತಿದ್ದವಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
Art
Manuscript
Music
Courtesy:
Transliteration
Kariya kāloḷage sikkida mariya nāyiyante,
aṣṭamadavemba kariya kāloḷagenna sigisi,
meṭṭi meṭṭi tuḷisuttiddeyalla!
Arasina uppanuṇḍu āne sēne daḷa
arasa[na] kaisere hiḍivante,
ennātmadalli huṭṭida mada,
ennane tindu tēguttiddavayyā
paramaguru paḍuviḍi sid'dhamallināthaprabhuve.
ಸ್ಥಲ -
ಬಹಿರಂಗದ ಅಷ್ಟಮದ ನಿರಸನಸ್ಥಲ