Index   ವಚನ - 96    Search  
 
ಕುಲಮದಕ್ಕೆ ಹೋರಾಡಿ ಕೆಟ್ಟುದು ಕೋಟಿ. ಛಲಮದಕ್ಕೆ ಹೋರಾಡಿ ಕೆಟ್ಟುದು ಕೋಟಿ. ರೂಪಮದಕ್ಕೆ ಹೋರಾಡಿ ಕೆಟ್ಟುದು ಕೋಟಿ. ಯೌವ್ವನ ಮದಕ್ಕೆ ಹೋರಾಡಿ ಕೆಟ್ಟುದು ಕೋಟಿ. ವಿದ್ಯಾಮದಕ್ಕೆ ಹೋರಾಡಿ ಕೆಟ್ಟುದು ಕೋಟಿ. ಧನಮದಕ್ಕೆ ಹೋರಾಡಿ ಕೆಟ್ಟುದು ಕೋಟಿ. ರಾಜ್ಯಮದಕ್ಕೆ ಹೋರಾಡಿ ಸತ್ತುದು ಕೋಟಿ. ತಪಮದಕ್ಕೆ ಹೋರಾಡಿ ಕೆಟ್ಟುದು ಕೋಟಿ. ನಿನಗಾಗಿ ಕೆಟ್ಟವರನಾರನೂ ಕಾಣೆನಯ್ಯ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.