Index   ವಚನ - 108    Search  
 
ವೃಥಾ ಸತಿ ಸುತ ಪಿತ ಮಾತೆಯರ ಮದ ತಲೆಗೆ ಹತ್ತಿ, ಉಮ್ಮತ್ತದ ಕಾಯ ಸವಿದ ಕಪಿಯಂತೆ, ಹುಮ್ಮಸದಿಂದುಲಿದು, ಧರ್ಮದಾಯಗುಣವಿಲ್ಲದೆ ಕರ್ಮಕೆ ಗುರಿಯಾಗಿ ಕೆಟ್ಟರು ಹಲಬರು. ಮತ್ಸರದ ಮಾಯದ ಬಲೆಯಲ್ಲಿ ಹುಚ್ಚುಗೊಂಡಿಪ್ಪರು. ಅದು ಎಂತೆಂದೊಡೆ: ಗುರುವಿನೆಡೆಗೆ ಮತ್ಸರ, ಲಿಂಗದೆಡೆಗೆ ಮತ್ಸರ, ಜಂಗಮದೆಡೆಗೆ ಮತ್ಸರ, ಹಿರಿಯರೆಡೆಗೆ ಮತ್ಸರ ಮಾಡಿ, ಭವವೆಂಬ ಮಾರಿಯ ಅಣಲೊಳಗೆ ಸಿಕ್ಕಿದರಯ್ಯ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.