Index   ವಚನ - 114    Search  
 
ಅರಿಷಡುವರ್ಗವೆಂಬ ಕರ್ಮಿಯ ಬಲಿಯೊಳಿಂಬು ಗುರು ನೀ ಮಾಡಲಿಬೇಡ ಗುಪ್ತದಿಂದಲೆನ್ನ ಕೂಡೆ. ಕಾಮ ಕ್ರೋಧ ಲೋಭ ಮೋಹ ಮದ ಮತ್ಸರದ ಡಂಬು ಈ ಮಹಾಬಲೆಯೊಳಿಟ್ಟು ನೀ ಮುನ್ನಗಲಿದೆ ದಿಟ ತಾಮಸಗುಣವನಳಿದು ಆ ಮಹಾಜ್ಞಾನದೊಳುಳಿದು ಭೂಮಿಯೊಳಗಿಪ್ಪ ಗಣಸ್ತೋಮದ ಪದಕ್ಕೆ ನಮೋಯೆಂದು ಶರಣು. | 1 | ಕರಿಯ ಸೊಂಡಿಲ ಮುರಿದು ವ್ಯಾಘ್ರನ ಶಿರವನರಿದು ಉರಗನ ಹೆಡೆಯ ಮೆಟ್ಟಿ ಸಿಂಹನ ಉರಿಯೊಳಿಟ್ಟು ಮರೆಯ ಕಣ್ಣ ಕಳದು ಭಲ್ಲೂಕನ ಕರದು ಇರಬಲ್ಲಡಾತನೆ ಸತ್ಯ ಈ ಭುವನದೊಳಗೆ ನಿತ್ಯ. | 2 | ಪರಮನ ಲಿಂಗಮುಖವಾಗಿ ಸತ್ಯಸಂಗ ಶರಣ ನಿರ್ಮಲದೇಹಿ ಸರ್ವಗಣಕೆಲ್ಲ ಮೋಹಿ ಗುರು ಪಡುವಿಡಿ ಸಿದ್ಧವರಮಲ್ಲಿನಾಥನೊಳಿರ್ದು ಹೆರೆಹಿಂಗದಿಪ್ಪ ಜಾಣ ಮೂರುಲೋಕಪ್ರವೀಣ. | 3 |