Index   ವಚನ - 115    Search  
 
ವ್ಯಸನವೇಳೆಂಬ, ರಸವ್ಯಸನವೇಳೆಂಬ ರಸವಿಷಯದ ಮಡುವು ದೆಸೆದೆಸೆಗೆ ಹಬ್ಬಿ, ವಸುಧೆಯರನೆಲ್ಲರ ಮಸಿಮಣ್ಣ ಮಾಡಿ ಹಸಗೆಡಿಸಿ ಕಾಡುತಿದೆ. ವ್ಯಸನವೇಳನುರುಹಿ, ಅಸಮಪದದಲ್ಲಿಪ್ಪ ನಿರ್ವ್ಯಸನನ ಪಾದಕ್ಕೆ ನಮೋ ನಮೋ ಎಂಬೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.