Index   ವಚನ - 118    Search  
 
ತನುವ್ಯಸನ ಮನವ್ಯಸನ ಧನವ್ಯಸನ ರಾಜ್ಯವ್ಯಸನ ಉತ್ಸಾಹವ್ಯಸನ ವಿಶ್ವಾಸವ್ಯಸನ ಸೇವಕವ್ಯಸನವೆಂಬ ಸಪ್ತವ್ಯಸನಂಗಳು. ಇವಕ್ಕೆ ವಿವರ: ತನುವ್ಯಸನವೆತ್ತಿದಲ್ಲಿ ಪುತ್ರಮಿತ್ರಕಳತ್ರಯಾದಿಗಳ ಬಯಸುತಿಹೆನು. ವಿಶ್ವಾಸವೆಸನವೆತ್ತಿದಲ್ಲಿ ವಿಶ್ವಾಸದಿಂದ ಪರರಿಗೆ ಬೋಧಿಸಿ ಭೇದಿಸೇನೆನುತ್ತಿಹನು. ಸೇವಕವ್ಯಸನವೆತ್ತಿದಲ್ಲಿ ಹೋಗಬೇಕು ಬರಬೇಕು ತರಬೇಕು ಕೋಟಲೆಗೊಳಬೇಕು ಎನುತಿಹನು. ಇಂತೀ ಸಪ್ತವ್ಯಸನಂಗಳಲ್ಲಿ ನೀನಲ್ಲದನ್ಯವಿಲ್ಲವಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.