Index   ವಚನ - 121    Search  
 
ಅನ್ನದ ಗೊಡವಿಲ್ಲದಾತಂಗೆ ಆರಂಭದ ಗೊಡವಿಯುಂಟೇ? ಖೇಚರ ಪವನಸಾಧಕಂಗೆ ಭೂಚರದಲಡಿಯಿಡುವ ಬಯಕೆಯುಂಟೇ? ವಜ್ರಾಂಗಿಯ ತೊಟ್ಟಿಪ್ಪಾತಂಗೆ ಬಾಣದ ಭಯವುಂಟೇನಯ್ಯಾ? ನಿರ್ಮಾಯಕಂಗೆ ಮಾಯದ ಹಂಗುಂಟೇ? ನಿರ್ವ್ಯಸನಿಗೆ ವ್ಯಸನದ ಹಂಗುಂಟೇ ? ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥನೊಳು ಬೆರೆದಾತಂಗೆ ಅನ್ಯದೈವದ ಹಂಗುಂಟೇ?