Index   ವಚನ - 131    Search  
 
ಸರ್ಪಕಡಿದು ಸತ್ತ ಹೆಣನೆದ್ದು ಸುಳಿದಾಡುವುದ ಕಂಡೆ. ಎಡೆ ಐದರೊಳಿಪ್ಪ ಅಗಳಿಗೊಂದೊಂದು ಭೂತನ ಕಂಡೆ. ಭೂತನ ಗೆಣೆವಿಡಿದ ಕಾಗೆಯಕುಳ ತಿಂಬುದ ಕಂಡೆ. ಮಡುವಿಗೆ ಜಾಲವಬೀಸುವ ಮಾಯದ ಜಾಲಗಾರ ಚಂದ್ರಸೂರ್ಯರ ಒಡಲಂ ಹೊಕ್ಕು ನೆಗೆದಾಡದ ಮುನ್ನ ಉಡುಪತಿ ಗಾದ ಬಿದ್ದ, ಕಸಪತಿ ತೊದಳಿಗನಾದ, ಗಂಧಪತಿ ದಂದುಗಕ್ಕೊಳಗಾದ, ಮುನ್ನ ಸ್ಪರುಷನಪತಿ ಪರಿಯಟಂಗೊಂಡ. ಇಂತೀ ಎಳೆದಾಟ ಮುಂದುಗೊಳ್ಳದ ಮುನ್ನ ಯತಿಗಳ ಯತಿತನ ಹಾರಿತ್ತು; ಸಿದ್ಧರ ಸಿದ್ಧತ್ವ ಕೆಟ್ಟಿತ್ತು. ಶಿವಯೋಗಿಗಳ ಯೋಗತ್ವ ಕೆಡುವುದ ಕಂಡೆನಿದೇನು ಚೋದ್ಯ ಹೇಳಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ?