Index   ವಚನ - 138    Search  
 
ಸ್ಥೂಲದಲ್ಲಿಪ್ಪುದೆನ್ನಯ ಮನ, ಸೂಕ್ಷ್ಮದಲ್ಲಿಪ್ಪುದೆನ್ನಯ ಮನ, ಕಾರಣದಲ್ಲಿಪ್ಪುದೆನ್ನ ಮನ. ಅದೆಂತೆಂದರೆ: ಸ್ಥೂಲದಲ್ಲಿಪ್ಪುದ ಕಂಡು ಸೂಕ್ಷ್ಮದಲ್ಲಿ ನೆನೆದು, ಕಾರಣದಲ್ಲಿ ಹೇಳುತ್ತಿಪ್ಪುದೆನ್ನಯ ಮನ. ದಿವ್ಯಧ್ಯಾನದಂತೆ ಹಲವು ಪರಿಗಾದರೂ ರತಿಸುತಿದೆ ಎನ್ನಯ ಮನ. ಮರ್ಕಟನ ದಾಳಿಯಿಂದ ಸಾಯಸಬಡುತಿದ್ದೆನಯ್ಯ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.