ಉಳಿ ಬಾಚಿಂಗೆ ಹರಿಯದ ಕೊರಡು,
ಕೊಡಲಿ ಕುಡುಗೋಲಿಂಗೆ ಹರಿವುದೆ?
ಪುರಾತರ ವಚನಾಮೃತವೆಂಬ ಉಳಿಯಲ್ಲಿ ಕಡಿದು
ಬಾಚಿಯಲ್ಲಿ ಕೆತ್ತಿದರೆ ನಾಚದೆ ಮನ?
ವೇದಾಗಮವೆಂಬ ಕೊಡಲಿ
ಕುಡುಗೋಲಿಂಗೆ ಹರಿವುದೆ? ಹರಿಯದು.
ಕೊರಡುಮನ ಜರಡುಮನ ಜಾಳುಮನ ಹಾಳುಮನ
ಕೋಳುಮನ ಕುಪಿತಮನ ಸರ್ವಚಾಂಡಾಲ ಮನದ
ಮೇಳದ ಬಲೆಯೊಳು ಬಿದ್ದು ಭಂಗಬಡುತ್ತಿದ್ದೆನೈ
ನಿರ್ಭಂಗ ನಿರ್ಲೇಪ ನಿಜಗುರು ನಿಶ್ಚಿಂತ ಸ್ವಯಂಭೂ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
Art
Manuscript
Music
Courtesy:
Transliteration
Uḷi bāciṅge hariyada koraḍu,
koḍali kuḍugōliṅge harivude?
Purātara vacanāmr̥tavemba uḷiyalli kaḍidu
bāciyalli kettidare nācade mana?
Vēdāgamavemba koḍali
kuḍugōliṅge harivude? Hariyadu.
Koraḍumana jaraḍumana jāḷumana hāḷumana
kōḷumana kupitamana sarvacāṇḍāla manada
mēḷada baleyoḷu biddu bhaṅgabaḍuttiddenai
nirbhaṅga nirlēpa nijaguru niścinta svayambhū
paramaguru paḍuviḍi sid'dhamallināthaprabhuve.
ಸ್ಥಲ -
ಮನೋವಿಕಾರ ನಿರಸನಸ್ಥಲ