Index   ವಚನ - 141    Search  
 
ಉದಯವಾಯಿತೆಂದು ಉದರಕ್ಕೆ ಕುದಿವುದೀ ಮನ ರಾತ್ರಿಯಾದುದ ಕಂಡು ವಿಷಯಕ್ಕೆ ಕುದಿವುದೀ ಮನ ಉದಯ ಅಸ್ತಮಾನವೆಂಬ ಕಾನನದ ನಡುವೆ ಸಿಲ್ಕಿ ಸುತ್ತುತ್ತಿಪ್ಪುದು ಕಣ್ಗಾಣದಂಧಕನಂತೆ. ಸದಾ ಚಣಚಣಕೊಂದೊಂದನೆಣಸಿಯೆಣಸಿ ಕಾಡೋದೀ ಬಣಗುಮನ, ಜಣಗುಮನ, ಠಕ್ಕಮನ ಟುಕ್ಕಮನ, ಕೋಪಿಮನ, ಜಾಪಿಮನ. ಜಾಪಿಮನದ ತಾಪಸದೊಳು ಸಿಲ್ಕಿ ನಾ ಪರದೇಶಿಯಾದೆನಯ್ಯಾ. ಮನವೆಂಬ ಮಾರಿಗೆನ್ನನೊಪ್ಪಿಸದೆ ಕಾಯೊ ಕಾಯೊ ಕರುಣಾಳುವೆ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.