Index   ವಚನ - 149    Search  
 
ಆಸೆಯೆಂಬುದು ಆರಾರನು ಕೆಡಿಸದಯ್ಯ? ಸೀಮೆ ಭೂಮಿಗಾಸೆಗೈದು ಮಡಿದ ರಾಜರ ಹೇಳೆಂದರೊಂದು ಕೋಟ್ಯಾನುಕೋಟಿ. ಹೊನ್ನು ಹೆಣ್ಣಿಂಗೆ ಆಸೆಗೈದು ಮಡಿದವರ ಹೇಳೆಂದರೊಂದು ಕೋಟ್ಯಾನುಕೋಟಿ. ಹೆಣ್ಣು ವಿಷಯಕ್ಕೆ ಆಸೆಗೈದು ಮಡಿದವರೊಂದು ಕೋಟ್ಯಾನುಕೋಟಿ. ಹೊನ್ನು ಹೆಣ್ಣು ಮಣ್ಣಿಗೆ ಆಸೆಗೈದು ಮಡಿದವರ ಕಾಂಬೆನಲ್ಲದೆ, ನಿನಗಾಡಿ ನಿರಾಸಕ್ತರಾಗಿ ಸತ್ತವರನಾರನೂ ಕಾಣೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.