Index   ವಚನ - 148    Search  
 
ಮಾನಸ ವಾಚಿಕ ಕಾಯಿಕದಲ್ಲಿ ಆಸೆಯನೆ ಮುಂದುಗೊಳಿಸಿದೆಯಯ್ಯಾ. ಅದು ಎಂತೆಂದರೆ: ಮನಸ್ಸು ನಿಮ್ಮ ನೆನೆಯದೆ ಅನ್ಯಕ್ಕೆ ಹರಿದು ಪರಧನ ಪರಸ್ತ್ರೀಯರಾಸೆಯನೆ ನೆನವುದು. ವಾಚಿಕ ನಿಮ್ಮ ಸ್ತೋತ್ರಿಸದೆ ಒಡಲಾಸೆಯನೆ ನುಡಿವುದು. ಕಾಯಿಕ ನಿಮ್ಮ ಮುಟ್ಟಿ ಪೂಜಿಸದೆ ಅನ್ಯವನಾಸೆಗೈದು ಮುಟ್ಟುತ್ತಿಪ್ಪುದು. ಇಂತೀ ಮಾನಸ ವಾಚಿಕ ಕಾಯಿಕವೆಂಬ ತ್ರಿಕರಣದಲ್ಲಿ ಆಸೆಯನೆ ಮುಂದುಗೊಂಡುಯಿಪ್ಪ ಮಾನವರು ನಿರಾಸಕ್ತನನೆತ್ತ ಬಲ್ಲರಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.