Index   ವಚನ - 159    Search  
 
ವಾರಿಯಿಲ್ಲದ ಕೆರೆಗೆ ಹಾರೈಸಿ ಬಂದ ತುರುವಿನಂತೆ, ಬೂರದ ಮರಕ್ಕೆ ಹಾರೈಸಿ ಬಂದ ಗಿಣಿಹಿಂಡಿನಂತೆ, ನಳಿನವಿಲ್ಲದ ಕೊಳಕೆರಗಿದಳಿವಿಂಡಿನಂತೆ, ಮಲಹರನ ಭಕ್ತಿ ಜ್ಞಾನ ವೈರಾಗ್ಯವಿಲ್ಲದ ಅಧಮರಿಗೆ ಆಸೆಮಾಡದಿರು: ಆಸೆ ಮಾಡಿದರೆ ವ್ಯರ್ಥ. ಆಸೆಮಾಡು ಆಸೆಮಾಡು ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥನೆಂಬ ಧನಿಕನ.