ಕೊಡುವವ ಮಾನವನೆಂದು ಒಡಲಾಸೆಯ ತೋರದಿರು,
ಕೊಡುವವ ಮಾನವನಲ್ಲ.
ಕೊಡುವವ ಕೊಂಬುವವ ಮಾನವರ ನಡುವಿಪ್ಪ
ಮಹಾತ್ಮ ಸಂಜೀವಂಗೆ ಒಡಲಾಸೆ ತೋರಿ ಬೇಡಿಕೊ.
ಜೀವನ ಬುದ್ಧಿಯಿಂದ ನರನನಾಸೆಗೈಯದಿರು.
ಆಸೆಗೈದರೆ ಕಾವವರಲ್ಲ, ಕೊಲ್ಲುವವರೂ ಅಲ್ಲ,
ಕೊಡುವವರೂ ಅಲ್ಲ, ಬಿಡುವವರೂ ಅಲ್ಲ.
ನಾಯ ಬಾಲವ ನಂಬಿ ಹೊಳೆಯ ಹಾದವರುಂಟೇ?
ವೃಷಭನ ಬಾಲವ ಪಿಡಿದರೆ ನದಿಯ ತಡಿಯ ಸೇರುವರಲ್ಲದೆ.
ನಂಬು ನಂಬು ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲನೆಂಬ
ಮಹಾಭಾಗ್ಯವ ನಂಬಿದರೆ ನಿನಗೆ ಬಡತನವೆ ಆತ್ಮ?
Art
Manuscript
Music
Courtesy:
Transliteration
Koḍuvava mānavanendu oḍalāseya tōradiru,
koḍuvava mānavanalla.
Koḍuvava kombuvava mānavara naḍuvippa
mahātma san̄jīvaṅge oḍalāse tōri bēḍiko.
Jīvana bud'dhiyinda narananāsegaiyadiru.
Āsegaidare kāvavaralla, kolluvavarū alla,
koḍuvavarū alla, biḍuvavarū alla.
Nāya bālava nambi hoḷeya hādavaruṇṭē?
Vr̥ṣabhana bālava piḍidare nadiya taḍiya sēruvarallade.
Nambu nambu nam'ma paramaguru paḍuviḍi sid'dhamallanemba
mahābhāgyava nambidare ninage baḍatanave ātma?