Index   ವಚನ - 160    Search  
 
ಕಾಮಧೇನುವಲ್ಲದೆ ಸಾದಾ ಧರೆಯ ಗೋವುಗಳು ಪಂಚಾಮೃತವನೀಯಬಲ್ಲವೆ? ಸರ್ವರ ತೃಪ್ತಿಂಗೆ ಕೇಳು ಆತ್ಮ. ಕಲ್ಪವೃಕ್ಷ ಸ್ವಾದಫಲವೀವುದೆಂದು ಬೇವಿನಮರಕೆ ಹಾರೈಸಿಹೋದರೆ ಬರೆಕಾಯಿ. ಕಾಮಧೇನು ಕಲ್ಪವೃಕ್ಷಗಿಂದಲಿ ಮೀರಿದ ಕಾಮಾರಿಲಿಂಗ ನಿನ್ನ ಆತ್ಮದೊಳಿರಲು ಅದ ಮರದು ಅನ್ಯರಿಗೆ ಆಸೆಗೈಯದಿರು. ಆಸೆಗೈ ಆಸೆಗೈ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವ.