ಸಂಸಾರಸುಖಕ್ಕೆ ಕಟ್ಟಿದ ಮನೆ,
ಸಂಸಾರಸುಖಕ್ಕೆ ಕೊಂಡ ಹೆಣ್ಣು,
ಸಂಸಾರಸುಖಕ್ಕೆ ಆದ ಮಕ್ಕಳು,
ಸಂಸಾರಸುಖಕ್ಕೆ ನೆರೆದ ಬಂಧುಬಳಗ,
ಸಂಸಾರಸುಖಕ್ಕೆ ಗಳಿಸಿದ ದ್ರವ್ಯ, ಸಂಸಾರಸುಖಕ್ಕೆ
ಹೊಂದಿದ ಕ್ಷೇತ್ರ ಬೇಸಾಯ,
ಸಂಸಾರ ಸುಖ-ದುಃಖ ಘನವಾಗಿ
ಸತ್ತು ಸತ್ತು ಹುಟ್ಟುವ ಮಾನವರು
ನಿಃಸಂಸಾರದಿಂದ ನಿಮ್ಮನರಿದು,
ನಿಮ್ಮ ಜ್ಞಾನದೊಳಿಂಬುಗೊಂಡು,
ಭವವಿರಹಿತರಾಗುವುದಿದನೇನಬಲ್ಲರಯ್ಯ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ?