ಹಳ್ಳದೊಳು ತೇಲಿಹೋಗುವ ಕಂಬಕೆ
ತೊರೆನೆರೆಗಳು ಮುಸುಕಿ
ಹೋಗುತಿದೆ ನೋಡಾ!
ತೊರೆನೆರೆಗಳ ಸಂಭ್ರಮದಲ್ಲಿ ಹೋಗುವ ಸ್ತಂಭ
ಆರಿಗೆ ಕಾಣಬಾರದು ನೋಡಾ!
ಹಳ್ಳವ ಬತ್ತಿಸೆ, ತೊರೆನೆರೆಗಳ ಕೆಡಿಸಿ,
ಹಳ್ಳದೊಳಿಹ ಕಂಬದೊಳಿಪ್ಪ ಮಾಣಿಕ್ಯವ
ಸಾಧಿಸಿಕೊಳಬಲ್ಲರೆ ನಿಃಸಂಸಾರಿ ನಿರಾಭಾರಿ ಕಾಣಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
Art
Manuscript
Music
Courtesy:
Transliteration
Haḷḷadoḷu tēlihōguva kambake
toreneregaḷu musuki
hōgutide nōḍā!
Toreneregaḷa sambhramadalli hōguva stambha
ārige kāṇabāradu nōḍā!
Haḷḷava battise, toreneregaḷa keḍisi,
haḷḷadoḷiha kambadoḷippa māṇikyava
sādhisikoḷaballare niḥsansāri nirābhāri kāṇā
paramaguru paḍuviḍi sid'dhamallināthaprabhuve.