Index   ವಚನ - 187    Search  
 
ಆನೆಯ ಹೆಣಕ್ಕೆ ಕೋಡಗ ಶೋಕಂಗೈವುದ ಕಂಡೆ. ಮಾಗಿಗಂಜಿದ ಕೋಗಿಲೆ ಮರುಜೇವಣಿಗೆಯ ಬೆಟ್ಟದೊಳಡಗುವುದ ಕಂಡೆನು. ಸಾಗರದ ಮೇಲೆ ಹಾರುವ ಹಂಸ ಭ್ರಮರನ ಗೆಣೆವಿಡಿಯಲಿ. ಯತಿ ಸಿದ್ಧ ಸಾಧ್ಯರೆಲ್ಲ ಸಂಸಾರಭರಿತರಾದರೇನು ಚೋದ್ಯ ಹೇಳಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ?