Index   ವಚನ - 193    Search  
 
ಅರ್ಥ ಪ್ರಾಣ ಅಭಿಮಾನವ ಗುರುಲಿಂಗಜಂಗಮಕ್ಕೆ ಸವೆದು, ಸಂಸಾರಬಂಧನವ ಕಳೆದ ಸಂಸಾರಿಗಳಿಗೆ ಸದ್ಭಕ್ತರಿಗೆ ಸಂಸಾರಿಗಳೆನಬಹುದೆ? ಎನಲಾಗದು. ಅದು ಎಂತೆಂದರೆ: ಚಂದ್ರಮನ ಕಿರಣದೊಳು ಬಿಸಿಯುಂಟೇನಯ್ಯಾ? ಪರಮಾತ್ಮನ ಬೆರೆದ ನಿಬ್ಬೆರಗಿ[ನ] ಶರಣರಿಗೆ ಸಂಸಾರ ಉಂಟೇನಯ್ಯಾ? ತನುಸಂಸಾರಂಭವ ಗುರುವಿಂಗಿತ್ತು, ಮನಸಂಸಾರಂಭವ ಲಿಂಗಕ್ಕಿತ್ತು , ಧನಸಂಸಾರಂಭವ ಜಂಗಮಕ್ಕಿತ್ತು ನಿಃಸಂಸಾರಿಯಾಗಿಪ್ಪ ಶರಣ ಬಸವಣ್ಣ ಚೆನ್ನಬಸವಣ್ಣ ಪ್ರಭುರಾಯ ಮುಖ್ಯವಾದ ಪ್ರಮಥಗಣಂಗಳ ಪಾದಕ್ಕೆ ನಮೋ ನಮೋ ಎಂಬೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.