Index   ವಚನ - 199    Search  
 
ಹಿಂದೇನು ಸುಕೃತವ ಮಾಡಿದ ಕಾರಣ ಇಂದೆನಗೆ ಗುರುಪಾದ ದೊರೆಯಿತ್ತು ನೋಡಾ. ಗುರುವೆಂಬೆರಡಕ್ಷರದ ಸ್ಮರಣೆಯ ನೆನೆದು ಪರಿಭವವ ತಪ್ಪಿಸಿಕೊಂಡೆ ನೋಡಾ. ಗುರುವೆಂಬೆರಡಕ್ಷರವನೇನೆಂದು ಉಪಮಿಸವೆನಯ್ಯಾ, ಸಾಕ್ಷಿ: ಗುಕಾರಂ ಚ ಗುಣಾತೀತಂ ರುಕಾರಂ ರೂಪವರ್ಜನಮ್ | ಗುಣರೂಪಮತೀತೊ ಯೋ ಸದೃಷ್ಟಃ [ಸ]ಗುರುಃ ಸ್ಮೃತಃ ||'' ಎಂದುದಾಗಿ, ಇಂತಪ್ಪ ಗುರುವನೆಂತು ಮರೆವೆನಯ್ಯಾ. ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆಂಬ ಗುರುವ ಮರೆದವರಿಗಿಂದೇ ನರಕ.