Index   ವಚನ - 201    Search  
 
ಗುರುವೆ ಬೇರೆ ಹರ ಬೇರೆಯೆಂಬ ಕುನ್ನಿ ಮಾನವ ನೀ ಕೇಳು. ಗುರು ಬೇರಲ್ಲ, ಹರ ಬೇರಲ್ಲ ; ಗುರುವೂ ಹರನೂ ಒಂದೇ. ಗುರು ಕಿರಿದ ಮಾಡಿ, ಹರನ ಹಿರಿದು ಮಾಡಬಾರದು. ಹರನ ಕಿರಿದು ಮಾಡಿ, ಗುರುವ ಹಿರಿದು ಮಾಡಬಾರದು. ಪಾರ್ವತಿಯೊಳು ಪರಮೇಶ ಗುರುವಿನ ಮಹಿಮೆ ಹೇಳಿದ. ಕೇಳರಿಯಾ ಮನುಜ? ಅದು ಎಂತೆಂದರೆ. ಗುರುದೇವನು ಮಹಾದೇವನು, ಗುರುದೇವನೆ ಸದಾಶಿವನು, ಗುರುವಿಂದ ಪರವಿನ್ನಾವುದೂ ಇಲ್ಲ. ಸಾಕ್ಷಿ: ಗುರುದೇವೋ ಮಹಾದೇವೋ ಗುರುದೇವಃ ಸದಾಶಿವಃ | ಗುರುದೈವಾತ್ ಪರನ್ನಾಸ್ತಿ ತಸ್ಮೈ ಶ್ರೀಗುರುವೇ ನಮಃ || ಎಂದುದಾಗಿ, ಹೀಗೆಂಬ ಗುರುವ ಮರೆದಾಗಳೆ ಭವಮಾಲೆ ತಪ್ಪದಯ್ಯಾ, [ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ].