ಗುರು ನರನೆಂದು, ಸತ್ತನುಕೆಟ್ಟನುಯೆಂಬ
ನರಕಜೀವಿ ನೀ ಕೇಳಾ.
ಗುರು ಸತ್ತರೆ ಜಗವುಳಿಯಬಲ್ಲುದೆ?
ಗುರು ಅಳಿವವನೂ ಅಲ್ಲ, ಉಳಿವವನೂ ಅಲ್ಲ.
ಸಾಕ್ಷಿ:
ಸ್ಥಾವರ ಜಂಗಮಾದರಂ ನಿರ್ಮಾಲ್ಯೇ ಸ್ಥಿರಮೇವ ಚ | (?)
ಜ್ಞಾನವಂದಿತಪಾದಾಯ ತಸ್ಮೈ ಶ್ರೀಗುರುವೇ ನಮಃ ||''
ಎಂದುದಾಗಿ,
ಗುರು ಸತ್ತ, ಕೆಟ್ಟ ಎಂದು ಬಸುರ
ಹೊಯಿದುಕೊಂಡು ಅಳುತಿಪ್ಪ
ಕುರಿಮಾನವರಿಂಗೆ ಗುರುವಿಲ್ಲ, ಲಿಂಗವಿಲ್ಲ,
ಜಂಗಮವಿಲ್ಲ, ಪಾದೋದಕ ಪ್ರಸಾದವಿಲ್ಲವಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
Art
Manuscript
Music Courtesy:
Video
TransliterationGuru naranendu, sattanukeṭṭanuyemba
narakajīvi nī kēḷā.
Guru sattare jagavuḷiyaballude?
Guru aḷivavanū alla, uḷivavanū alla.
Sākṣi:
Sthāvara jaṅgamādaraṁ nirmālyē sthiramēva ca | (?)
Jñānavanditapādāya tasmai śrīguruvē namaḥ ||''
endudāgi,
guru satta, keṭṭa endu basura
hoyidukoṇḍu aḷutippa
kurimānavariṅge guruvilla, liṅgavilla,
jaṅgamavilla, pādōdaka prasādavillavayyā
paramaguru paḍuviḍi sid'dhamallināthaprabhuve.