Index   ವಚನ - 210    Search  
 
ಗುರುದೀಕ್ಷೆಯಿಲ್ಲದ ಶಿಲೆಯ ಕೊರಳಲ್ಲಿ ಕಟ್ಟಿಕೊಂಡು ಲಿಂಗವೆಂದು ನುಡಿವ ಚಾಂಡಾಲಿ ನೀ ಕೇಳಾ. ಗುರುದೀಕ್ಷೆಯಿಲ್ಲದುದು ಶಿಲೆಯಲ್ಲದೆ, ಲಿಂಗವಲ್ಲ. ಅದು ಎಂತೆಂದರೆ: ಭಿತ್ತಿಯ ಮೇಲಣ ಚಿತ್ರಕ್ಕೆ ಚೈತನ್ಯವುಂಟೇನಯ್ಯಾ? ಗುರುದೀಕ್ಷವಿಲ್ಲದ ಲಿಂಗಕ್ಕೆ ಪ್ರಾಣಕಳೆಯುಂಟೇನಯ್ಯಾ? ಪ್ರೇತಲಿಂಗವ ಕೊರಳಲ್ಲಿ ಕಟ್ಟಿ ಭೂತಪ್ರಾಣಿಗಳಾಗಿ ಲಿಂಗವಂತರೆಂಬ ಪಾಷಂಡಿಗಳ ನೋಡಾ! ಸಾಕ್ಷಿ: ಪ್ರೇತಲಿಂಗ ಸಂಸ್ಕಾರಿ ಭೂತಪ್ರಾಣೀ ನ ಜಾನಾತಿ'' ಎಂದುದಾಗಿ, ಹೆಸರಿನ ಲಿಂಗ, ಹೆಸರಿನ ಗುರುವಾದರೆ ಅಸಮಾಕ್ಷನ ನೆನಹು ನೆಲೆಗೊಳ್ಳದು ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.