ಬೀರ ಜಟ್ಟಿ ಮೈಲಾರ ಮಾರಿ ಮಸಣೆಯೆಂಬ
ಅನ್ಯದೈವವು ಮನೆಯೊಳಿರುತಿರೆ, ಅದ ವಿಚಾರಿಸದೆ,
ನಿನ್ನ ಚಿತ್ಕಳೆ ಪರಬ್ರಹ್ಮಲಿಂಗವನವರಿಗೆ ಕೊಟ್ಟು,
ಹೊನ್ನು ಹಣವ ಬೇಡಿ ಕೊಂಡು ಒಡಲ ಹೊರೆದು
ಗುರುವೆಂದುಕೊಂಬ ಗುರುವೆ ನೀ ಕೇಳಾ.
ವಿಚಾರಹೀನರಿಗೆ ಉಪದೇಶವ ಕೊಟ್ಟರೆ ಅವಿಚಾರಿ
ನೀನಹುದನರಿಯಾ?
ಸಾಕ್ಷಿ:
ಅನ್ಯದೈವಪೂಜಕಸ್ಯ ಗುರೋರುಪದೇಶಃ ನಾಸ್ತಿ ನಾಸ್ತಿ |
ಅವಿಚಾರಂ ತದೀಕ್ಷಣಾತ್ ರೌರವಂ ನರಕಂ ವ್ರಜೇತ್ ||''
ಎಂದುದಾಗಿ,
ಮುನ್ನ ಯಮಪಾತಕಕೆ ಗುರಿಯಾಗುವ ಸಂದೇಹಿಗಳ
ಗುರು ಶಿಷ್ಯ ಸಂಬಂಧವ ಕಂಡು ನಸುನಗುತ್ತಿದ್ದನಯ್ಯಾ
ನಮ್ಮ ಪರುಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
Art
Manuscript
Music
Courtesy:
Transliteration
Bīra jaṭṭi mailāra māri masaṇeyemba
an'yadaivavu maneyoḷirutire, ada vicārisade,
ninna citkaḷe parabrahmaliṅgavanavarige koṭṭu,
honnu haṇava bēḍi koṇḍu oḍala horedu
guruvendukomba guruve nī kēḷā.
Vicārahīnarige upadēśava koṭṭare avicāri
nīnahudanariyā?
Sākṣi:
An'yadaivapūjakasya gurōrupadēśaḥ nāsti nāsti |
avicāraṁ tadīkṣaṇāt rauravaṁ narakaṁ vrajēt ||''
Endudāgi,
munna yamapātakake guriyāguva sandēhigaḷa
guru śiṣya sambandhava kaṇḍu nasunaguttiddanayyā
nam'ma parumaguru paḍuviḍi sid'dhamallināthaprabhuve.