Index   ವಚನ - 220    Search  
 
ಅಂಧಕ ಅಂಧಕರು ಕರವಿಡಿದರಣ್ಯದೊಳು ಹೋಗುತೊಂದು ಕೊಳ್ಳವ ಬಿದ್ದು ಚಾಲಿವರಿವಂತೆ, ಅಜ್ಞಾನಿ ಗುರುವಿಂಗೆ ಅಜ್ಞಾನಿ ಶಿಷ್ಯನಾದರೆ ಅವರ ಪಾತಕಕೆ ಕಡೆಯೇನಯ್ಯಾ! ಹೆಸರಿನ ಗುರುವಿಗೆ ಹೆಸರಿನ ಶಿಷ್ಯನಾಗಿ ಗುರು-ಶಿಷ್ಯ ಸಂಬಂಧಕ್ಕೆ ಹೋರಾಡಿ ಒಡಲಾಸೆಗೆ ಲಿಂಗವ ಮಾರಿಕೊಂಬ ಕಡುಪಾಪಿಗೆ ಗುರುತ್ವವುಂಟೇನಯ್ಯಾ? ಗುರುತ್ವವಿಲ್ಲ. ಸಾಕ್ಷಿ: ನಾಮಧಾರಕ ಶಿಷ್ಯಶ್ಚ ನಾಮಧಾರೀ ಗುರುಸ್ತಥಾ | ಅಂಧಕೋಂಧಕರಾಬದ್ಧೋ ದ್ವಿವಿಧಂ ಪಾತಕಂ ಭವೇತ್ ||'' ಎಂದುದಾಗಿ, ಬುದ್ಧಿಹೀನ ಶಿಷ್ಯಂಗೆ ಉಪದೇಶವ ಕೊಟ್ಟ ಗುರುವ ಎದ್ದೆದ್ದಿ ತೆಗೆಯುವರು ರೌರವ ನರಕದಲ್ಲಿ ಎಂದಾತ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.