Index   ವಚನ - 226    Search  
 
ಶರಧಿಯನಾರಾಧಿಸಿದರೆ ಹವಳ ಮೌಕ್ತಿಕಗಳನೀವುದು ನೋಡಾ! ಗಿರಿಯನಾರಾಧಿಸಿದರೆ ಬಯಸಿದ ಮೂಲಿಕೆಗಳನೀವುದು ನೋಡಾ! ಗುರುವನಾರಾಧಿಸಿದರೆ ಗುರುಕರುಣ ಜಲಸಮುದ್ರದ ತೆರೆಯೊಳು ಲಿಂಗವೆಂಬ ಸುವಸ್ತುವನೊಗೆಯಿತ್ತು ನೋಡಾ! ಆ ಲಿಂಗ ಎನ್ನ ಸೋಂಕಿ, ಅಂಗ ಚಿನ್ನವಾಗಿ, ಲಿಂಗವ ಪೂಜಿಸಿ ಭವಂಗಳ ದಾಂಟಿ ನಿರ್ಭವನಾಗಿದ್ದೆನು ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.