Index   ವಚನ - 227    Search  
 
ತ್ರಿವಿಧ ತನುವಿಗೆ ತ್ರಿವಿಧ ದೀಕ್ಷೆ. ತ್ರಿವಿಧ ದೀಕ್ಷೆಗೆ ತ್ರಿವಿಧ ಲಿಂಗ. ತ್ರಿವಿಧ ಲಿಂಗಕ್ಕೆ ತ್ರಿವಿಧ ಕರವ ತೋರಿದ ಗುರುವೆ ಶರಣು. ಅದು ಎಂತೆಂದರೆ: ಕಾಯದ ಕರದಲ್ಲಿ ಇಷ್ಟಲಿಂಗವ ಕೊಟ್ಟು ಸ್ಥೂಲತನುವಿನ ಪೂರ್ವಾಶ್ರಯವ ಕಳೆದು ಕ್ರಿಯಾದೀಕ್ಷೆಯ ಮಾಡಿದ ಗುರುವೆ ಶರಣು. ಮನದ ಕರದಲ್ಲಿ ಪ್ರಾಣಲಿಂಗವ ಕೊಟ್ಚು ಸೂಕ್ಷ್ಮತನುವಿನ ಪೂರ್ವಾಶ್ರಯವ ಕಳೆದು ಪ್ರಣಮಪಂಚಾಕ್ಷರಿಯ ಕರ್ಣದಲ್ಲಿ ಹೇಳಿ, ಮಂತ್ರದೀಕ್ಷೆಯ ಮಾಡಿದ ಗುರುವೆ ಶರಣು. ಭಾವದ ಕರದಲ್ಲಿ ಭಾವಲಿಂಗವ ಕೊಟ್ಟು ಕಾರಣತನುವಿನ ಪೂರ್ವಾಶ್ರಯವ ಕಳೆದು ಮಸ್ತಕದಲ್ಲಿ ಹಸ್ತವ ಮಡುಗಿ ವೇಧಾದೀಕ್ಷೆಯನಿತ್ತ ಮದ್ಗುರುವೆ ಶರಣು. ನಿಮ್ಮ ಪಾದದಡಿದಾವರೆಯೊಳು ಮನವ ಭೃಂಗನ ಮಾಡಿಸು ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.