Index   ವಚನ - 230    Search  
 
ಕಂಡೆನೆನ್ನ ಕರದೊಳು ಕರುಣವರಮೂರ್ತಿಲಿಂಗವ. ಕಂಡೆನೆನ್ನ ಕರದೊಳು ಆತ್ಮಲಿಂಗವ. ಕಂಡೆನೆನ್ನ ಕರದೊಳು ಚಿನ್ಮಯ ಚಿದ್ರೂಪ ಚಿತ್ಪ್ರಕಾಶಲಿಂಗವ. ಕಂಡೆನೆನ್ನ ಕರದೊಳು ಮನಾತೀತಮಗೋಚರ ಲಿಂಗವ. ಕಂಡೆನೆನ್ನ ಕರದೊಳು ನಿರ್ನಾಮ ನಿರ್ಗುಣ ನಿರಂಜನ ನಿರವಯಲಿಂಗವ. ಕಂಡೆನೆನ್ನ ಕರದೊಳು ಮಹಾಲಿಂಗವ. ಸಾಕ್ಷಿ: “ಮಹಾಲಿಂಗಮಿದಂ ದೇವಿ ಮನೋತೀತಮಗೋಚರಂ | ನಿರ್ನಾಮ ನಿರ್ಗುಣಂ ನಿತ್ಯಂ ನಿರಂಜನ ನಿರಾಮಯಂ ||'' ಎಂದೆನಿಸುವ ಲಿಂಗವ ಕಂಡೆನಲ್ಲ ಎನ್ನ ಕರದೊಳು! ಆ ಲಿಂಗವೆನ್ನ ಕರಸ್ಥಲಕ್ಕೆ ಇಷ್ಟಲಿಂಗವಾಗಿ, ಮನಸ್ಥಲಕ್ಕೆ ಪ್ರಾಣಲಿಂಗವಾಗಿ, ಭಾವಸ್ಥಲಕ್ಕೆ ಭಾವಲಿಂಗವಾಗಿ; ಇಷ್ಟಲಿಂಗ ಪ್ರಾಣಲಿಂಗ ಭಾವಲಿಂಗವೆಂಬ ಮೂರುಲಿಂಗವೆ ಆರುಲಿಂಗವಾಗಿ, ಆರುಲಿಂಗವೆ ಮೂವತ್ತಾರು ಲಿಂಗವಾಗಿ, ಮೂವತ್ತಾರು ಲಿಂಗವೆ ಇನ್ನೂರ ಹದಿನಾರು ಲಿಂಗವಾಗಿ, ಸರ್ವಾಂಗವೆಲ್ಲ ಲಿಂಗಮಯವಾಗಿ, ಸರ್ವತೋಮುಖದ ಲಿಂಗವೆ ಗೂಡಾಗಿಪ್ಪ ಶರಣ ಬಸವಣ್ಣ ಚೆನ್ನಬಸವಣ್ಣ ಪ್ರಭುರಾಯ ಮುಖ್ಯವಾದ ಅಸಂಖ್ಯಾತ ಮಹಾಗಣಂಗಳ ಲೆಂಕರ ಲೆಂಕನೆಂದೆನಿಸಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.