Index   ವಚನ - 240    Search  
 
ಮುಂಡದ ಮೇಲಣ ತಲೆಯ ಮೂರ್ತವ ಅಂಗೈ ಮೇಲೆಗೂಡಿ, ಅಂಗೈ ಮೇಲೆಯ ಮೂರ್ತವ ಮುಂಡದ ತಲೆಗೂಡಿ, ಕಂಡು ಸುಖಿಯಲ್ಲದೆ ಲಿಂಗಾಂಗಸಂಬಂಧಿಯಲ್ಲಾ, ಅಂಗಲಿಂಗಸಂಬಂಧಿಯಲ್ಲಾ. ಬರಿಯ ಮಾತಿನ ಬಣಗರ ಮೆಚ್ಚುವನೆ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.