ಪರುಷ ಮನೆಯೊಳಿರುತಿರೆ ಪಾಷಾಣಕೆ ಚಾಲಿವರಿವಂತೆ,
ಸುಧೆ ಇರಲು ಅಂಬಲಿ ಬಯಸುವನಂತೆ,
ಗುರುಕರುಣದ ಇಷ್ಟಲಿಂಗ ತನ್ನ ಕರದೊಳಿರುತಿರೆ
ಅದ ಮರೆದು
ಸೂಳೆಗೆ ಹುಟ್ಟಿದ ಮಗುವು ಕಂಡ ಕಂಡವರಿಗೆ
'ಅಪ್ಪಾ' ಎಂದು ಕರೆವಂತೆ,
ಈ ಸಂತೆಸೂಳೆಮಕ್ಕಳಿಗೆ ಒಂದು ದೇವರು ನಿತ್ಯವಲ್ಲ!
ಹಲವು ಕಲ್ಲಿಗೆರಗಿ ಕುಲಕೋಟಿ ನರಕಕಿಳಿವ ಹೊಲೆಯರ
ಮುಖವನೆನಗೊಮ್ಮೆ ತೋರದಿರಯ್ಯ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.