ಹಸಿಹಂದರದಿ ಪಡೆದ ಗಂಡನ ವಂಚಿಸಿ,
ವಿಷಯಾತುರದಿ ಪಿಸುಣಮಾನವರನಪ್ಪುವ ಹಾದರಗಿತ್ತಿಯೆಂತೆ,
ಪಂಚಕಳಸವಿಕ್ಕಿ ದೇವಭಕ್ತರ ನಡುವೆ
ಹಸ್ತಮಸ್ತಕ ಸಂಯೋಗವ ಮಾಡಿ
ಗುರುಕರುಣಿಸಿ ಕೊಟ್ಟ ಪ್ರಾಣಲಿಂಗವನವಿಶ್ವಾಸವ ಮಾಡಿ,
ಕ್ಷೇತ್ರ ಜಾತ್ರಿ ಲಿಂಗವ ಕಂಡು, ವಿಶ್ವಾಸವಿಟ್ಟು ಎರಗುವ
ಪಂಚಮಹಾಪಾತಕರ ನೋಡಾ!
ಸಾಕ್ಷಿ:
“ಪ್ರಾಣಲಿಂಗಮವಿಶ್ವಸ್ಯ ತೀರ್ಥಲಿಂಗಂ ವಿಶೇಷಯೇತ್ |
ಪ್ರಸಾದನಿಷ್ಫಲಂ ಚೈವ ರೌರವಂ ನರಕಂ ವ್ರಜೇತ್ || ''
ಎಂದುದಾಗಿ,
ಮತ್ತೊಮ್ಮೆ ಗ್ರಂಥಸಾಕ್ಷಿಯ ಕೇಳು ಮುಂದರಿಯದ ಮಾನವ.
ಸಾಕ್ಷಿ:
“ಇದಂ ತೀರ್ಥಮಿದಂ ತೀರ್ಥಂ ಭ್ರಮಂತಿ ತಾಮಸಾ ನರಾಃ|
ಶಿವಜ್ಞಾನಂ ನ ಜಾನಂತಿ ಸರ್ವತೀರ್ಥಂ ನಿರರ್ಥಕಂ ||''
ಎಂದುದಾಗಿ.
ಇಂತೆಂಬುದನರಿಯದೆ, ಅಜ್ಞಾನದ
ಭ್ರಾಂತಿಯಲ್ಲಿ
ಅನ್ಯಲಿಂಗವನಾಶ್ರಯಿಸುವ
ಕುನ್ನಿಗಳಿಗೆ ಗುರುವಿಲ್ಲ ಜಂಗಮವಿಲ್ಲ
ಪಾದೋದಕವಿಲ್ಲ ಪ್ರಸಾದವಿಲ್ಲವಾಗಿ ಮುಕ್ತಿಯೆಂಬುದು
ಎಂದಿಗೂ ಇಲ್ಲವಾಗಿ ರೌರವನರಕದಲ್ಲಿಕ್ಕುವ ನಮ್ಮ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
Art
Manuscript
Music
Courtesy:
Transliteration
Hasihandaradi paḍeda gaṇḍana van̄cisi,
viṣayāturadi pisuṇamānavaranappuva hādaragittiyente,
pan̄cakaḷasavikki dēvabhaktara naḍuve
hastamastaka sanyōgava māḍi
gurukaruṇisi koṭṭa prāṇaliṅgavanaviśvāsava māḍi,
kṣētra jātri liṅgava kaṇḍu, viśvāsaviṭṭu eraguva
pan̄camahāpātakara nōḍā!
Sākṣi:
“Prāṇaliṅgamaviśvasya tīrthaliṅgaṁ viśēṣayēt |
prasādaniṣphalaṁ caiva rauravaṁ narakaṁ vrajēt ||''
Endudāgi,
mattom'me granthasākṣiya kēḷu mundariyada mānava.
Sākṣi:
“Idaṁ tīrthamidaṁ tīrthaṁ bhramanti tāmasā narāḥ|
śivajñānaṁ na jānanti sarvatīrthaṁ nirarthakaṁ ||''
endudāgi.
Intembudanariyade, ajñānada
bhrāntiyalli
an'yaliṅgavanāśrayisuva
kunnigaḷige guruvilla jaṅgamavilla
pādōdakavilla prasādavillavāgi muktiyembudu
endigū illavāgi rauravanarakadallikkuva nam'ma
paramaguru paḍuviḍi sid'dhamallināthaprabhuve.