Index   ವಚನ - 258    Search  
 
ಗುರುಕರುಣದ ಇಷ್ಟಲಿಂಗವ ಜರಿದನ್ಯದೈವಕ್ಕೆರಗುವ ಕುರಿಗಳ ಶಿವಭಕ್ತರೆನಬಹುದೆ? ಪತಿಯಿರಲು ಪರಪುರುಷಗೆ ಗತಿಯಾಗಿ ತಿರುಗುವ ಹೊಲತಿಯ ಮತಿಯಂತೆ ಸಜ್ಜನೆಯೆನಬಹುದೆ? ಸಿತಕಂಠಲಿಂಗ ಕರದೊಳಿರೆ ಪರ ಪ್ರತುಮೆಗೆರಗುವ ಹೊಲೆಯನ ಕ್ಷಿತಿಯೊಳು ಶಿವಭಕ್ತನೆನಬಹುದೆ ? | 1 | ಮಾರಿ ಮಸಣಿ ಮೈಲಾರನ ಬಳಿ ನೀರ ಕುಡಿದು ಅವರೆಂಜಲ ಮಾರಾರಿಲಿಂಗಕ್ಕೆ[ರೆದುಂ]ಬ ಸಮ ಗಾರನ ಯಮರಾಜ ಬಾಧಿಸಿ ರೌರವ ನರಕದೊಳಿಕ್ಕುವನಿದ ಧರಣಿಯೊಳು ತಿಳಿದು ನೋಡಿರೌ. | 2 | ತಲೆಯೊಳು ಕಿಚ್ಚು ತಳಿಗೆ ಶಸ್ತ್ರ ಸಲೆ ಬೇವಿನುಡುಗೆ ಬೆನ್ನಲಿ ಸಿಡಿ ಹಲವು ಹರಕೆಯನು ಪರದೈವ ಗಳಿಗೆ ಮಾಡುವ ಕ್ಷೀಣ ಅಜ್ಞಾನಿ ಹೊಲೆಯ ತಾ ಶಿವಭಕ್ತನೆಂದೆನೆ ಮುಂದೆ ಕುಲಕೋಟಿ ನರಕದೊಳಿಕ್ಕುವ ನೇಮ. | 3 | ಗುರುಲಿಂಗಜಂಗಮವೆಂಬವು ಪರಶಿವನ ಚಿದ್ರೂಪವೆಂಬುದ ನರಿಯದ ಹಲವು ದೈವಗಳಿ ಗೆರಗಿ ಸೂಳೆಯಂತೆ ತಿರುಗುವ ನರನ ಲಿಂಗವಂತನೆಂದೆನ್ನೆ ಮುಂದೆ ಹರ ಶಿಕ್ಷೆಯ ಮಾಡುವ ನನಗೆ. | 4 | ಶಿವನೆ ದೈವ ಲಿಂಗಾಂಗಿಯೆ ಕುಲಜ ಭವಿಗಳೆಲ್ಲರು ಅಕುಲಜರೊ ಬವರ ಧರೆಯೊಳುಸುರಿದೆ ಹವಿನೇತ್ರ ಪಡುವಿಡಿ ಸಿದ್ಧಮಲ್ಲನೆಂ ಬುವನ ಸರ್ವಕನೆಂದು ನಂಬಿದ ಅವ ನಿತ್ಯ ಸತ್ಯ ಸಜ್ಜನನೆಂಬೆ. | 5 |