ಜನನಭಯದ ಮೂಲದ ಬೇರ
ಕಿತ್ತು ಸುಟ್ಟುರುಹುವ ಭಸ್ಮ,
ಮರಣಭಯದ ಮೂಲದ
ದುರಿತ ದುಃಕೃತವನಿಟ್ಟೊರೆಸುವ
ಶ್ರೀ ಮಹಾಭಸ್ಮ,
ಹಣೆಯೊಳಿಹ ದುರಿತಲಿಖಿತವ
ತೊಡೆದು ದೂರಮಾಡುತ್ತಿಪ್ಪ ಭಸ್ಮ,
ತ್ರಿಣಯನ ಸಾಲೋಕ್ಯಪದದ
ಬಯಕೆಯ ತೋರುವ ಭಸ್ಮ,
ಮರ್ತ್ಯಲೋಕದ ಯತಿ
ಸಿದ್ಧ ಸಾಧ್ಯರು ಮಹಾಗಣಂಗಳ
ಮುಕ್ತರ ಮಾಡುತಿಪ್ಪ ಭಸ್ಮ,
ತ್ರಿಣಯನ ಸಾಲೋಕ್ಯದ ದೇವಗಣಂಗಳ
ನಿತ್ಯರ ತೋರುವ ಚಿದ್ಭಸ್ಮ , ಚಿದಾನಂದ ಭಸ್ಮ,
ಇದು ಶುದ್ಧ ಪರಶಿವನ ಚಿದ್ರೂಪವೆಂದು ಮುದದೆ ಧರಿಸಿ,
ಭವಸಾಗರವ ದಾಂಟಿ ನಿತ್ಯನಾಗಿದ್ದೆನು ಕಾಣಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
Art
Manuscript
Music
Courtesy:
Transliteration
Jananabhayada mūlada bēra
kittu suṭṭuruhuva bhasma,
maraṇabhayada mūlada
durita duḥkr̥tavaniṭṭoresuva
śrī mahābhasma,
haṇeyoḷiha duritalikhitava
toḍedu dūramāḍuttippa bhasma,
triṇayana sālōkyapadada
bayakeya tōruva bhasma,
martyalōkada yati
sid'dha sādhyaru mahāgaṇaṅgaḷa
muktara māḍutippa bhasma,
triṇayana sālōkyada dēvagaṇaṅgaḷa
Nityara tōruva cidbhasma, cidānanda bhasma,
idu śud'dha paraśivana cidrūpavendu mudade dharisi,
bhavasāgarava dāṇṭi nityanāgiddenu kāṇā
paramaguru paḍuviḍi sid'dhamallināthaprabhuve.