ವೇದಕ್ಕೆಯೂ [ಮುಖ್ಯ] ಶ್ರೀವಿಭೂತಿ,
ಶಾಸ್ತ್ರಕ್ಕೆಯೂ ಮುಖ್ಯ ಶ್ರೀವಿಭೂತಿ,
ಪೌರಾಣಕ್ಕೆ[ಯೂ] ಮುಖ್ಯ ಶ್ರೀವಿಭೂತಿ,
ಆಗಮಕ್ಕೆಯೂ ಮುಖ್ಯ ಶ್ರೀವಿಭೂತಿ.
ವೇದಾಗಮಶಾಸ್ತ್ರಪುರಾಣವನೋದುವ ವಿಪ್ರನಾದರೂ ಆಗಲಿ,
ಶ್ರೀವಿಭೂತಿ ಶ್ರೀ ಪಂಚಾ[ಕ್ಷ]ರಿಯಿಲ್ಲದೆ ಓದಿದ ಓದು ವ್ಯರ್ಥ.
ಶ್ರೀವಿಭೂತಿಯ ಧರಿಸಿ, ಶ್ರೀ ಪಂಚಾಕ್ಷರಿಯ ನೆನೆದು,
ಏಳು ಜನ್ಮದಲ್ಲಿ ಹೊರೆಯ ಕಳೆದು,
ಶಿವದೇಹಿಯಾದೆನು ನೋಡಾ.
ಅದು ಎಂತೆಂದರೆ :
ಸಾಕ್ಷಿ:
“ನಮಃ ಶಿವಾಯೇತಿ ಮಂತ್ರಂ ಯಂ ಕರೋತಿ ತ್ರಿಪುಂಡ್ರಕಂ |
ಸಪ್ತಜನ್ಮಕೃತಂ ಪಾಪಂ ತತ್‍ಕ್ಷಣೇನ ವಿನಶ್ಯತಿ ||''
ಎಂದುದಾಗಿ,
ಪರಮಾತ್ಮನ ಸ್ವರೂಪವುಳ್ಳ ಶ್ರೀ ವಿಭೂತಿಯ ಸರ್ವಾಂಗವೆಲ್ಲಕೆಯೂ
ಉದ್ಧೂಳನವ ಮಾಡಿ ಪರಮಪದದಲ್ಲಿ ಓಲಾಡುತಿದ್ದೆನು ಕಾಣಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
Art
Manuscript
Music
Courtesy:
Transliteration
Vēdakkeyū [mukhya] śrīvibhūti,
śāstrakkeyū mukhya śrīvibhūti,
paurāṇakke[yū] mukhya śrīvibhūti,
āgamakkeyū mukhya śrīvibhūti.
Vēdāgamaśāstrapurāṇavanōduva vipranādarū āgali,
śrīvibhūti śrī pan̄cā[kṣa]riyillade ōdida ōdu vyartha.
Śrīvibhūtiya dharisi, śrī pan̄cākṣariya nenedu,
ēḷu janmadalli horeya kaḷedu,
śivadēhiyādenu nōḍā.
Adu entendare:
Sākṣi:
“Namaḥ śivāyēti mantraṁ yaṁ karōti tripuṇḍrakaṁ |
saptajanmakr̥taṁ pāpaṁ tatkṣaṇēna vinaśyati ||''
Endudāgi,
paramātmana svarūpavuḷḷa śrī vibhūtiya sarvāṅgavellakeyū
ud'dhūḷanava māḍi paramapadadalli ōlāḍutiddenu kāṇā
paramaguru paḍuviḍi sid'dhamallināthaprabhuve.