Index   ವಚನ - 267    Search  
 
ಭಸಿತದ ಮೇಲೆ ಅನ್ಯದೇವರ ಬಂಡಾರವನಿಡುವ ಅನಾಮಿಕ ಹೊಲೆಯನ ಶಿವಭಕ್ತನೆಂದು ಕರೆಯಬಹುದೆ? ಕರೆಯಬಾರದು. ಕರೆದವರಿಗೆ ಮಹಾದೋಷ. ತೊತ್ತಿನಮೇಲೆ ಗರತಿಯಲ್ಲದೆ, ಗರತಿಯ ಮೇಲೆ ತೊತ್ತೆ? ಮಿಥ್ಯದೈವದ ಗಂಟಲಗಾಣವೆಂಬ ಶ್ರೀ ವಿಭೂತಿಯ ಧರಿಸಿ, ಶಿವಪದ ಸಾಧಿಸಲರಿಯದೆ ಮಣ್ಣು ಪಟ್ಟಿಯ ಧರಿಸಿ ಕೆಡುವ ಕುನ್ನಿಗಳ ನಾನೇನೆಂಬೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.