Index   ವಚನ - 277    Search  
 
ಪುಣ್ಯಫಲಕೆ ಬೀಜ ಶ್ರೀಪಂಚಾಕ್ಷರಿ, ಪಾಪಗಿರಿಗೆ ವಜ್ರ ಶ್ರೀಪಂಚಾಕ್ಷರಿ, ಶ್ರೀಗುರುಕೃಪೆಯನೊಲಿಸುವರೆ ಶ್ರೀಪಂಚಾಕ್ಷರಿ, ಲಿಂಗದೆಡೆಗೆ ನಡೆ ಸೋಪಾನ ಶ್ರೀಪಂಚಾಕ್ಷರಿ, ಜಂಗಮಕೆ ತವರ್ಮನೆ ಶ್ರೀಪಂಚಾಕ್ಷರಿ. ಶ್ರೀ ಗುರುಲಿಂಗಜಂಗಮ ನಿತ್ಯಮುಕ್ತರ ಮಾಡಿತೋರುವ ಶ್ರೀಪಂಚಾಕ್ಷರಿಯ ಅರಿತು ನೆನೆದರೆ ಅನಂತಕೋಟಿ ಪುಣ್ಯ, ಮರೆತು ನೆನೆದರೆ ಮಹಾಕೋಟಿ ಪುಣ್ಯ. ಅರಿತು ಅರಿಯದೆ, ಮರೆತು ಮರೆಯದೆ ಸದಾವಕಾಲದಲ್ಲಿ 'ನಮಃಶಿವಾಯ' ಎಂದು ಜಪಿಸುತಿಪ್ಪ ಶಿವಶರಣರ ಪಾದಧ್ಯಾನದಲ್ಲಿಪ್ಪ ಕೃಪೆಯನೆನಗೆ ಪಾಲಿಸಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.