ಗುರುವಾದಾತನು ಪರಶಿವ ತಾನೆ ನೋಡಾ!
ಲಿಂಗವಾದಾತನು ಪರಶಿವ ತಾನೆ ನೋಡಾ!
ಜಂಗಮವಾದಾತನು ಪರಶಿವ ತಾನೆ ನೋಡಾ!
ವಿಭೂತಿಯಾದಾತನು ಪರಶಿವ ತಾನೆ ನೋಡಾ!
ರುದ್ರಾಕ್ಷಿಯಾದಾತನು ಪರಶಿವ ತಾನೆ ನೋಡಾ!
ಪಾದೋದಕವಾದಾತನು ಪರಶಿವ ತಾನೆ ನೋಡಾ!
ಪ್ರಸಾದವಾದಾತನು ಪರಶಿವ ತಾನೆ ನೋಡಾ!
ಪಂಚಾಕ್ಷರಿಯಾದಾತನು ಪರಶಿವ ತಾನೆ ನೋಡಾ!
ಇಂತು ಅಷ್ಟಾವರಣಮುಖದಲ್ಲಿ ನಿಂತು
ಅಂತಕನ ಪಾಶವ ಸುಟ್ಟುರುಹಿದೆಯಲ್ಲ ಉರಗಧರ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
Art
Manuscript
Music
Courtesy:
Transliteration
Guruvādātanu paraśiva tāne nōḍā!
Liṅgavādātanu paraśiva tāne nōḍā!
Jaṅgamavādātanu paraśiva tāne nōḍā!
Vibhūtiyādātanu paraśiva tāne nōḍā!
Rudrākṣiyādātanu paraśiva tāne nōḍā!
Pādōdakavādātanu paraśiva tāne nōḍā!
Prasādavādātanu paraśiva tāne nōḍā!
Pan̄cākṣariyādātanu paraśiva tāne nōḍā!
Intu aṣṭāvaraṇamukhadalli nintu
antakana pāśava suṭṭuruhideyalla uragadhara
paramaguru paḍuviḍi sid'dhamallināthaprabhuve.
ಸ್ಥಲ -
ಅಷ್ಟಾವರಣ ಮಹಾತ್ಮೆಯಸ್ಥಲ