Index   ವಚನ - 290    Search  
 
ಗುರುಕೃಪೆಯಿಲ್ಲದವನ ಕರ್ಮಹರಿಯದು. ಲಿಂಗ ಸೋಂಕದವನ ಅಂಗ ಚಿನ್ನವಡಿಯದು. ಜಂಗಮದರುಶನವಿಲ್ಲದವಂಗೆ ಮೋಕ್ಷಾರ್ಥಬಟ್ಟೆ ದೊರೆಯದು. ವಿಭೂತಿಯ ಧರಿಸದವ[0ಗೆ] ದುರಿತಲಿಖಿತಂಗಳು ತೊಡೆಯವು. ರುದ್ರಾಕ್ಷಿಯ ಧರಿಸದವಂಗೆ ರುದ್ರಪದ ಸಾಧ್ಯವಾಗದು. ಪಂಚಾಕ್ಷರಿಯ ಜಪಿಸದವನ ಪಂಚಭೂತದ ಹೊಲೆಯಳಿಯದು. ಪಾದೋದಕವ ಕೊಳದವನ ಪರಿಭವಂಗಳು ಅಳಿಯವು. ಪ್ರಸಾದ ಸೋಂಕದವಂಗೆ ಮುಕ್ತಿ ಸಾಧ್ಯವಾಗದು. ಇಂತೀ ಅಷ್ಟಾವರಣದಲ್ಲಿ ನೈಷ್ಠೆವಾರಿಯಾಗದನ್ನಕ್ಕರ ದೇವನಲ್ಲ ಭಕ್ತನಲ್ಲ ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.